Monday, March 24, 2008
ಉಸಿರು
ನನ್ನ ಉಸಿರಲಿ ಉಸಿರಾಗುವೆ ಎಂದು
ಉಸಿರು ಬಿಗಿದರು ಮೌನ ಯಾಕೆ ಇಂದು
ನೀ ಇರದ ಜೀವನ ಬಂಜರು ಭೂಮಿ
ಮಳೆ ಇಲ್ಲದ ಮರುಭೂಮಿ
ಕಂಗಳ ತುಂಬ ನಿನ್ನ ನೆನಪಿನ ನಿದ್ದೆ
ಎಲ್ಲಿ ಮರೆಯಾಗಿರುವೆ ಸನಿಹಕಿರದೆ
ನೊಂದಿರುವೆ ನಿನ್ನ ನೆನಪಲಿ
ಹೋಗಲಾರೆನು ನಿನ್ನ ಅಗಲಿ
ಕಾದಿರುವುದು ಈ ಜೀವ ನಿನ್ನ ನುಡಿ ಮುತ್ತುಗಳ
ಒಲವು ತುಂಬಿದ ಆ ಅಕ್ಕರೆಯ ಮಾತುಗಳ
ನೆನಪು
ಕನಸಿನ ಲೋಕದಲಿ ನೀನಿರುವೆ ನನ್ನೊಲವೇ
ಒಲವು ತುಂಬಿದೆ ನಿನ್ನಲ್ಲಿ ಉಸಿರೇ
ಪ್ರೇಮದ ಕಾಣಿಕೆಯಾಗಿದೆ ನೆನಪೇ
ಜೀವವು ಪರಿತಪಿಸುತಿದೆ ನಿನಗಾಗಿ
ಮನಸ್ಸಿನ ಮೂಲೆಯಲಿರುವೆ ಜೊತೆಯಾಗಿ
ಜೀವನದ ಪ್ರತಿ ಪುಟಗಳಲಿ ನೆನಪಾಗಿ
ಒಲವು ತುಂಬಿದೆ ನಿನ್ನಲ್ಲಿ ಉಸಿರೇ
ಪ್ರೇಮದ ಕಾಣಿಕೆಯಾಗಿದೆ ನೆನಪೇ
ಜೀವವು ಪರಿತಪಿಸುತಿದೆ ನಿನಗಾಗಿ
ಮನಸ್ಸಿನ ಮೂಲೆಯಲಿರುವೆ ಜೊತೆಯಾಗಿ
ಜೀವನದ ಪ್ರತಿ ಪುಟಗಳಲಿ ನೆನಪಾಗಿ
ಮಳೆ
ತುಂತುರು ಮಳೆಯಲಿ ಕುಣಿಯಲೆಂದು
ಕಾತುರದಿ ಕಾಯುತಿಹುದು ಈ ಮನವಿಂದು
ಮಳೆ ತುಂಬಿತ್ತು ಗುಡುಗಿನ ಆರ್ಭಟದಿಂದ
ಮನಸ್ಸು ಮುದುಡಿತ್ತು ನಿಶಬ್ದದಿಂದ
ಕಾತುರದಿ ಕಾಯುತಿಹುದು ಈ ಮನವಿಂದು
ಮಳೆ ತುಂಬಿತ್ತು ಗುಡುಗಿನ ಆರ್ಭಟದಿಂದ
ಮನಸ್ಸು ಮುದುಡಿತ್ತು ನಿಶಬ್ದದಿಂದ
Friday, March 21, 2008
ಮೆಲುದನಿಯ ಮಾತು
ಮರೆಯಲಾರೆನು ನಿನ್ನೊಡನೆ ಕಳೆದ ಕ್ಷಣಗಳಾ
ಹೃದಯಕೆ ಹತ್ತಿರವಾದ ನುಡಿ ಮುತ್ತುಗಳಾ
ಅದ್ಬುತ ನಿನ್ನ ಭಾವನೆಗಳ ಸ್ವರ್ಗ
ಅದಕ್ಕಿಲ್ಲಾ ಅಪಸ್ವರದ ರಾಗ
ನಿಷ್ಕಲ್ಮಷ ಪ್ರೀತಿಯಾ ಒಡತಿಯಾಗುವ ಸ್ವಾರ್ಥವಿಲ್ಲಾ
ಆದರೂ ನಿನಗಿದೆ ಹೃದಯದಲ್ಲಿ ನವಿರಾದ ಒಲವು
ಅದನ್ನು ಪ್ರೀತಿಯೆನ್ನಲು ದುಗುಡವಿರುವುದು ಮನಕೆ
ಭಾರ ಎನಿಸುತಿದೆ ಮನಸ್ಸು ಈ ತಳಮಳಕೆ
ಮನಸಲಿ ನೆನಪಾಗಿ ಹೃದಯಕೆ ಹತ್ತಿರವಾಗಿರುವೆ
ನಿನ್ನ ಭಾವನೆಗಳ ಸಾಗರದಲ್ಲಿ ಬಂಧಿಯಾಗಿರುವೆ
ಭಾವನೆಗಳ ಅಬ್ಬರದಲಿ ಮುಳುಗುವ ಭಯ
ಆದರೂ ಆ ಅಲೆಯಲ್ಲಿ ನಿನ್ನೊಡನಿರುವ ನಿರ್ಭಯ
Subscribe to:
Posts (Atom)