Wednesday, April 2, 2008

ಯುಗಾದಿ


ಬಂದಿದೆ ಹರುಷದಿ
ಹೊಸವರುಷದ ಬುನಾದಿ
ಸಂಭ್ರಮದ ಯುಗಾದಿ


ನವ ಹರುಷವು ನಮಗಿಂದು
ಬೇವು ಬೆಲ್ಲವ ತಿಂದು
ಸಿಹಿ ಕಹಿ ಸಮಾನವಾಗಿ ಸ್ವೀಕರಿಸುವೆವೆಂದು

ಲಭಿಸಲಿ ಸಂತಸದ ಕ್ಷಣಗಳು
ಅಶಾದಾಯಕವಾಗಿರಲಿ ದಿನಗಳು
ಕೋರುವೆ ಯುಗಾದಿಯ ಶುಭಾಶಯಗಳು

Monday, March 24, 2008

ಉಸಿರು


ನನ್ನ ಉಸಿರಲಿ ಉಸಿರಾಗುವೆ ಎಂದು
ಉಸಿರು ಬಿಗಿದರು ಮೌನ ಯಾಕೆ ಇಂದು

ನೀ ಇರದ ಜೀವನ ಬಂಜರು ಭೂಮಿ
ಮಳೆ ಇಲ್ಲದ ಮರುಭೂಮಿ

ಕಂಗಳ ತುಂಬ ನಿನ್ನ ನೆನಪಿನ ನಿದ್ದೆ
ಎಲ್ಲಿ ಮರೆಯಾಗಿರುವೆ ಸನಿಹಕಿರದೆ

ನೊಂದಿರುವೆ ನಿನ್ನ ನೆನಪಲಿ
ಹೋಗಲಾರೆನು ನಿನ್ನ ಅಗಲಿ

ಕಾದಿರುವುದು ಈ ಜೀವ ನಿನ್ನ ನುಡಿ ಮುತ್ತುಗಳ
ಒಲವು ತುಂಬಿದ ಆ ಅಕ್ಕರೆಯ ಮಾತುಗಳ

ನೆನಪು

ಕನಸಿನ ಲೋಕದಲಿ ನೀನಿರುವೆ ನನ್ನೊಲವೇ
ಒಲವು ತುಂಬಿದೆ ನಿನ್ನಲ್ಲಿ ಉಸಿರೇ
ಪ್ರೇಮದ ಕಾಣಿಕೆಯಾಗಿದೆ ನೆನಪೇ

ಜೀವವು ಪರಿತಪಿಸುತಿದೆ ನಿನಗಾಗಿ
ಮನಸ್ಸಿನ ಮೂಲೆಯಲಿರುವೆ ಜೊತೆಯಾಗಿ
ಜೀವನದ ಪ್ರತಿ ಪುಟಗಳಲಿ ನೆನಪಾಗಿ

ಮಳೆ

ತುಂತುರು ಮಳೆಯಲಿ ಕುಣಿಯಲೆಂದು
ಕಾತುರದಿ ಕಾಯುತಿಹುದು ಈ ಮನವಿಂದು
ಮಳೆ ತುಂಬಿತ್ತು ಗುಡುಗಿನ ಆರ್ಭಟದಿಂದ
ಮನಸ್ಸು ಮುದುಡಿತ್ತು ನಿಶಬ್ದದಿಂದ

Friday, March 21, 2008

ಮೆಲುದನಿಯ ಮಾತು


ಮರೆಯಲಾರೆನು ನಿನ್ನೊಡ‌ನೆ ಕಳೆದ ಕ್ಷಣಗಳಾ
ಹೃದಯಕೆ ಹತ್ತಿರವಾದ ನುಡಿ ಮುತ್ತುಗಳಾ

ಅದ್ಬುತ ನಿನ್ನ ಭಾವನೆಗಳ ಸ್ವರ್ಗ
ಅದಕ್ಕಿಲ್ಲಾ ಅಪಸ್ವರದ ರಾಗ‌

ನಿಷ್ಕಲ್ಮಷ ಪ್ರೀತಿಯಾ ಒಡತಿಯಾಗುವ ಸ್ವಾರ್ಥವಿಲ್ಲಾ
ಆದರೂ ನಿನಗಿದೆ ಹೃದಯದಲ್ಲಿ ನವಿರಾದ ಒಲವು

ಅದನ್ನು ಪ್ರೀತಿಯೆನ್ನಲು ದುಗುಡವಿರುವುದು ಮನಕೆ
ಭಾರ‌ ಎನಿಸುತಿದೆ ಮನಸ್ಸು ಈ ತಳಮಳಕೆ

ಮನಸಲಿ ನೆನಪಾಗಿ ಹೃದಯಕೆ ಹತ್ತಿರವಾಗಿರುವೆ
ನಿನ್ನ ಭಾವನೆಗಳ ಸಾಗರದಲ್ಲಿ ಬಂಧಿಯಾಗಿರುವೆ

ಭಾವನೆಗಳ ಅಬ್ಬ‌ರ‌ದ‌ಲಿ ಮುಳುಗುವ‌ ಭ‌ಯ‌
ಆದರೂ ಆ ಅಲೆಯ‌ಲ್ಲಿ ನಿನ್ನೊಡ‌ನಿರುವ ನಿರ್ಭ‌ಯ‌